ಹಿಂದಿ ಹೇರಿಕೆ ವಿಚಾರ : `ಕನ್ನಡದಲ್ಲಿ ಚೆಕ್ ಬರೆದರೆ ಮುಂಡೆ ಮಕ್ಳು ರಿಜೆಕ್ಟ್ ಮಾಡ್ತಾರೆ`
ನಮ್ಮ ತಾಯಿ ನಾಡು ಭಾಷೆ ನಮ್ಮದು, ದೆಹಲಿ, ಬಾಷೆ, ಹೈಕಮಾಂಡ್ ಗುಲಾಮಗಿರಿ ಯಾವುದು ನಡೆಯಲ್ಲ ಎಂದು ಜೆಡಿಎಸ್ ನಾಯಕ ಸಿಎಂ ಇಬ್ರಾಹಿಂ ಅವರು ಹಿಂದಿ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧ : ನಮ್ಮ ತಾಯಿ ನಾಡು ಭಾಷೆ ನಮ್ಮದು, ದೆಹಲಿ, ಬಾಷೆ, ಹೈಕಮಾಂಡ್ ಗುಲಾಮಗಿರಿ ಯಾವುದು ನಡೆಯಲ್ಲ. ಬಸವರಾಜ್ ಬೊಮ್ಮಾಯಿಯವರು ನಮ್ಮ ದುಡ್ಡಿನಲ್ಲಿ ಹಿಂದಿ ಆಚರಣೆ ಮಾಡ್ತಾ ಇದ್ದಾರೆ ಎಂದು ಜೆಡಿಎಸ್ ನಾಯಕ ಸಿಎಂ ಇಬ್ರಾಹಿಂ ಅವರು ಹಿಂದಿ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ನಮ್ಮದೇನಿದ್ರು ಬಸವಕೃಪಾ. ಕೇಶವಕೃಪವನ್ನ ದೆಹಲಿಯಲ್ಲಿ ಮೋದಿ ಮೆಚ್ಚಿಸುವ ಕೆಲಸ ಮಾಡಿ. ಕನ್ನಡದಲ್ಲಿ ಚೆಕ್ ಬರೆದರೆ ಮುಂಡೆ ಮಕ್ಳು ರಿಜೆಕ್ಟ್ ಮಾಡ್ತಾರೆ. ನಿಮಗೆ ತೆವಲಿದ್ದರೆ ದೆಹಲಿಯಿಂದ ಹಣ ತಂದು ಹಾಕಿಕೊಳ್ಳಿ. ಅತಿವೃಷ್ಟಿಯಾದವರ ಸಹಕಾರಕ್ಕೆ ಹಣ ಬಿಡುಗಡೆ ಮಾಡೋಕೆ ಆಗಲ್ಲ ನಿಮಗೆ, ನಮ್ಮ ದುಡ್ಡಲ್ಲಿ ಹಿಂದಿ ದಿವಸ ಮಾಡೋಕೆ ಹೊರಟಿದ್ದಾರೆ. ಸೋನಿಯಾಗಾಂಧಿ ರಾಹುಲ್ ಗಾಂಧಿ ಗಪ್‌ಚುಪ್ ಅಂದ್ರೆ ಕಾಂಗ್ರೆಸ್‌ನವರು ಸುಮ್ನಾಗ್ತಾರೆ. ಬಿಜೆಪಿಯವರು ಅದೇ ಕೆಲಸ ಮಾಡ್ತಾರೆ. ನಾವು ಹಿಂದಿ ಕಲಿತುಕೊಂಡು ಉತ್ತರಭಾರತಕ್ಕೆ ಹೋಗಿ ಪಾನಿಪೂರಿ ಮಾರೋ ಅಗತ್ಯ ಇಲ್ಲ. ಉತ್ತರ ಭಾರತದಿಂದ ಗುಜರಾಜ್‌ನಿಂದ ಬಂದು ಇಲ್ಲಿ ಪಾನಿ ಪೂರಿ ಮಾರ್ತಾ ಇರೋದು ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ‘Udta Punjab’ ಆಗುವ ಅಂಚಿನಲ್ಲಿ ಬೆಂಗಳೂರು; ಡ್ರಗ್ಸ್ ಮಾರಾಟದಲ್ಲಿ ಪೊಲೀಸರು ಭಾಗಿ!
ಹಿಂದಿ ಭಾಷೆ ದಿವಸ್ ಆಚರಣೆ ಮಾಡೋದು ಸಾಂಸ್ಕೃತಿಕ ವಿನಿಮಯ ಎನ್ನೋ ಸಿಟಿ ರವಿ ಹೇಳಿಕೆ ವಿಚಾರ ಮಾತನಾಡಿದ ಅವರು, ನಿಮ್ಮ ಅವ್ವನ ಭಾಷೆಗೆ ನಿಮ್ಮ ದುಡ್ ಖರ್ಚು ಮಾಡ್ರಪ್ಪ. ನಮ್ಮ ದುಡ್ಡು ಯಾಕೆ ನೀವು ಹಿಂದಿಗೆ ಖರ್ಚು ಮಾಡ್ತೀರ. ಇಂದು ಎಲ್ಲಾ ಇಲಾಖೆಗಳ ಕೆಲಸ ಕನ್ನಡದಲ್ಲೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ನಂತರ ಹಿಂದಿ ಭಾಷೆ ಹೇರಿಕೆ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕ ಯುಟಿ ಖಾದರ್, ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಮೌಲ್ಯವಿದೆ. ಭಾಷೆ ಎಂದರೆ ಆ ಪ್ರದೇಶದ ಸಂಸ್ಕೃತಿ, ಕನ್ನಡ ಭಾಷೆಗೆ ತನ್ನದೆ ಮಹತ್ವವಿದೆ. ಇದನ್ನ ಉಳಿಸೋದು ನಮ್ಮೆಲ್ಲರ ಜವಬ್ದಾರಿ. ಹಿಂದಿಗೂ ಸಹ ಅದರದ್ದೇ ಆದ ಮಹತ್ವ ಇದೆ. ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ, ಇಂಗ್ಲೀಷ್ ಅಂತರಾಷ್ಟ್ರೀಯ ಭಾಷೆ, ನಮ್ಮ ಪ್ರಾದೇಶಿಕ ಭಾಷೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ, ಹಿಂದಿ ದಿವಸ್ ಏಕೆ ವಿರೋಧಿಸಬೇಕು? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು, ಕನ್ನಡ ಭಾಷೆಯ ಅಭಿವೃದ್ದಿಗೆ ಕೆಲಸ ಮಾಡಬೇಕು. ಬೇರೆ ಭಾಷೆಯನ್ನು ಧ್ವೇಷಿಸುವ ಕೆಲಸ ಆಗಬಾರದು. ಕನ್ನಡ ಭಾಷೆಯಲ್ಲಿ ಕಲಿತವರಿಗೆ ಎಷ್ಟು ಉದ್ಯೋಗ ಕೊಡುತ್ತಿದ್ದೀರಿ? ಒತ್ತಾಯ ಪೂರ್ವಕವಾಗಿ ಯಾವುದೇ ಭಾಷೆ ಹೇರಿಕೆ ಆಗಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ : ಸಚಿವ ಕಾರಜೋಳ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.